Tuesday, 13 November 2018

ಕಿರಿಯ ತರಬೇತಿ ಅಧಿಕಾರಿಗಳಿಗೆ ಪರಿವೀಕ್ಷಣಾ ಅವಧಿಯಲ್ಲಿ ದಿನಭತ್ಯೆ ನೀಡುವ ಬಗ್ಗೆ.




ಕರ್ನಾಟಕ ಸರ್ಕಾರ


ಸಂಖ್ಯೆ: ಉತಇ/ತ/ಮಾಸ/ಸಿಆರ್-16/04-05

ನಿರ್ದೇಶಕರ ಕಛೇರಿ,
ಉದ್ಯೋಗ ಮತ್ತು ತರಬೇತಿ ಇಲಾಖೆ,
ನಂ:9/1, ಶ್ರೀ ಪ್ರಶಾಂತ್ ಕಾಂಪ್ಲೆಕ್ಸ್,
ಪಿ. ಕಳಿಂಗರಾವ್ ರಸ್ತೆ, ಬೆಂಗಳೂರು-27,
ದಿನಾಂಕ: 1.9.2004.


ಸುತೋಲೆ

ವಿಷಯ: ಕಿರಿಯ ತರಬೇತಿ ಅಧಿಕಾರಿಗಳಿಗೆ ಪರವೀಕ್ಷಣಾ ಅವಧಿಯಲ್ಲಿ ದಿನಭತ್ಯೆ ನೀಡುವ ಬಗ್ಗೆ.
ಉಲ್ಲೇಖ: ಸರ್ಕಾರಿ ಆದೇಶ ಸಂಖ್ಯೆ: ಸಿಆರ್ 15 ಸಸನಿ 8 ದಿ:29/6/99 ಮತ್ತು 24/2/2000.
- - - -

   ಇಲಾಖೆಯ ಕಿರಿಯ ತರಬೇತಿ ಅಧಿಕಾರಿಗಳನ್ನು ಹಲವಾರು ತರಬೇತಿ ಕಾರ್ಯಕ್ರಮಗಳಿಗೆ ನಿಯೋಜಿಸಲಾಗುತ್ತಿದೆ. ತರಬೇತಿಯಲ್ಲಿರುವಾಗ ದಿನಭತ್ಯೆಗಳನ್ನು ನೀಡುವ ಬಗ್ಗೆ ಹಲವಾರು ಕೈ.ತ.ಸಂಸ್ಥೆ ಪ್ರಾಚಾರ್ಯರು ಸ್ಪಷ್ಠೀಕರಣ/ಮಾರ್ಗದರ್ಶನ ನೀಡಲು ವಿನಂತಿಸಿರುತ್ತಾರೆ.

1. ಉಲ್ಲೇಖಿತ ಸರ್ಕಾರಿ ಆದೇಶಗಳ ಪ್ರಕಾರ ಯಾವುದೇ ಸರ್ಕಾರಿ ನೌಕರರು ಪರಿವೀಕ್ಷಣಾವಧಿಯಲ್ಲಿ ತರಬೇತಿಗೆ ನಿಯೋಜಿಸಿದರೆ ಸದರಿ ನೌಕರರಿಗೆ ದಿನಭತ್ಯೆ ಲಭ್ಯವಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.
2. ಆದರೆ ಸದರಿ ನೌಕರರು ತರಬೇತಿಗೆ ನಿಯೋಜಿಸಿದ ಸ್ಥಳಕ್ಕೆ ಮೊದಲ ಬಾರಿಗೆ ಹೋಗುವ ಮತ್ತು ನಿಯೋಜಿಸಿದ ಸ್ಥಳದಿಂದ ಅಂತಿಮವಾಗಿ ವಾಪಸ್ಸಾಗುವ ಪ್ರಯಾಣದ ಪ್ರವಾಸ ಭತ್ಯೆಗೆ ಅರ್ಹರಾಗಿರುತ್ತಾರೆ.ಆದ್ದರಿಂದ ಮೇಲಿನ ಸ್ಪಷ್ಠೀಕರಣ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ. ಮತ್ತು ಸಂಬಂದಿಸಿದ ಎಲ್ಲಾ ಕಿರಿಯ ತರಬೇತಿ ಅಧಿಕಾರಿಗಳ ಗಮನಕ್ಕೆ ತರುವುದು.


                                                                        ನಿರ್ದೇಶಕರು ಕರಡು ಪ್ರತಿಯನ್ನು ಒಪ್ಪಿರುತ್ತಾರೆ.
                                                                                                            -ಸಹಿ-
                                                                               ಉಪನಿರ್ದೇಶಕರು(ತ)
                                                                                 ನಿರ್ದೇಶಕರ ಪರವಾಗಿ,
                                                                                  ಉದ್ಯೋಗ ಮತ್ತು ತರಬೇತಿ.